Saturday, November 26, 2011

ಡಯಾಬಿಟಿಸ್ ಕಾಯಿಲೆ ಸಕ್ಕರೆ ಕಾಯಿಲೆ , ಮಧುಮೇಹ, ಡಯಾಬಿಟಿಸ್ ಕಾಯಿಲೆ ಹೇಗೆ ಬರುತ್ತದೆ?

ಅನೇಕರು ತಿಳಿದಿರುವಂತೆ ಸಕ್ಕರೆ ಕಾಯಿಲೆ ಒಂದು ರೋಗವಲ್ಲ. ಅದು ನಮ್ಮ ಶರೀರದಲ್ಲಿ ಉಂಟಾಗುವ ಒಂದು ಅಸಮತೋಲನ ಸ್ಥಿತಿ. ಯಾವುದೇ ವ್ಯಕ್ತಿ ತಾನು ಸೇವಿಸಿದ ಶರ್ಕರ ಅಂದರೆ ಸಕ್ಕರೆಯ ಅಂಶ ಜೀರ್ಣವಾಗಿ, ರಕ್ತಗತವಾಗಿ ವಿವಿಧ ಜೀವಕೋಶಗಳಿಗೆ ಸೇರಲು ಆತನ ದೇಹದಲ್ಲಿ ಇನ್ಸುಲಿನ್ ಎಂಬ ರಾಸಾಯನಿಕ ವಸ್ತು ತಕ್ಕ ಮಟ್ಟಿಗೆ ಬೇಕಾಗುತ್ತದೆ. ನಾವು ತಿನ್ನುವಷ್ಟು ಮಟ್ಟಿಗೆ ನಮ್ಮ ಶರೀರದಲ್ಲಿ ಇನ್ಸುಲಿನ್ ಉತ್ಪತ್ತಿಯಾಗುತ್ತಿದ್ದರೆ ನಾವು ತಿಂದ ಸಕ್ಕರೆ ಅಂಶವು ಜೀವಕೋಶಗಳಿಗೆ ಸೇರುತ್ತದೆ. ನಮ್ಮ ಶರೀರದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಪ್ರಮಾಣಕ್ಕಿಂತಲು ಅಧಿಕವಾಗಿ ಸಕ್ಕರೆ ಇಲ್ಲವೇ ಶರ್ಕಾರದ ಅಂಶ ನಮ್ಮ ಶರೀರ ಸೇರಿದರೆ, ಅಧಿಕವಾದ ಸಕ್ಕರೆ ಅಂಶವು ರಕ್ತದಲ್ಲಿ ಹಾಗೆಯೇ ಹರಿದಾಡುತ್ತಿರುತ್ತದೆ. ಹೀಗೆ ಸುಮ್ಮನೇ ಹರಿದಾಡುವ ಅಧಿಕವಾದ ಸಕ್ಕರೆ ಅಂಶವು ದೇಹದ ವಿವಿಧ ಭಾಗಕ್ಕೆ ಹಾನಿಯುಂಟುಮಾಡತೊಡಗುತ್ತದೆ. ಸ್ಥಿತಿಯನ್ನು ಸಕ್ಕರೆ ರೋಗ ಅಥವಾ ಮಧುಮೇಹ ರೋಗ ಇಲ್ಲವೇ ಎಂಗ್ಲಿಷ್‌ನಲ್ಲಿ ಡಿಯಾಬಿಟೆಸ್ ಮೆಲೈಟಸ್ ಎಂದು ಕರೆಯುತ್ತಾರೆ.


ಸಕ್ಕರೆ ಕಾಯಿಲೆ ಬರಲು ಕಾರಣವೇನು?
ಸಕ್ಕರೆ ಕಾಯಿಲೆ ಉಂಟಾಗಲು ಅನೇಕ ಕಾರಣಗಳಿದ್ದರೂ ಇನ್ಸುಲಿನ್ ಅಂಶದ ಕೊರತೆಯೇ ಒಂದು ಮುಖ್ಯ ಕಾರಣ.
ಈಗಾಗಲೇ ತಿಳಿಸಿದ ಹಾಗೆ ಇನ್ಸುಲಿನ್ ಉತ್ಪತ್ತಿ ಸರಿಯಾದ ಪ್ರಮಾಣದಲ್ಲಿ ಉಂಟಾಗದೆ ಇರಲು ಹಲವು ಕಾರಣಗಳಿವೆ.

ಮೊದಲನೆಯದಾಗಿ ವಂಶವಾಹಿನಿಯ ಮುಖಾಂತರ. ಅಂದರೆ ತಂದೆ ಅಥವಾ ತಾಯಿಯ ಮುಖಾಂತರವಾಗಿ ಅನುವಂಶಿಯವಾಗಿ ಬರಬಹುದು. ತಂದೆ ಮತ್ತು ತಾಯಿಗೆ ಸಕ್ಕರೆ ಕಾಯಿಲೆ ಇದ್ದಲ್ಲಿ ಶೇ.೫೦ರಷ್ಟು ಮಕ್ಕಳಿಗೆ ಬರುವ ಸಾಧ್ಯತೆ ಇದೆ. ಆದರೆ ಮಕ್ಕಳ ಜೀವನಶೈಲಿ ಸಕ್ಕರೆ ಕಾಯಿಲೆ ಬರಲು ಅನುಕೂಲವಾಗಿದ್ದರೆ ಚಿಕ್ಕ ವಯಸ್ಸಿನಲ್ಲೇ ಸಕ್ಕರೆ ಕಾಯಿಲೆಯ ರೋಗ ಲಕ್ಷಣ ಕಂಡು ಬರಬಹುದು. ತಂದೆ ಇಲ್ಲವೇ ತಾಯಿ ಒಬ್ಬರಿಗೆ ಇದ್ದರೆ ಶೇ.೨೫ರಷ್ಟು ಮಕ್ಕಳಿಗೆ ಬರಬಹುದು ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ


ಎರಡನೆಯ ಕಾರಣವೆಂದರೆ ಜೀವನಶೈಲಿ ಮತ್ತು ಆಹಾರ ಸೇವನೆಯ ಪದ್ದತಿ. ಹಲವರು ತಿಳಿದಿರುವಂತೆ ಅತಿಯಾದ ಪ್ರಮಾಣದಲ್ಲಿ ಸಕ್ಕರೆ ಸೇವನೆ ಮಾಡಿದರೆ ಸಕ್ಕರೆ ಕಾಯಿಲೆ ಬರುತ್ತದೆ ಎಂಬುದು ತಪ್ಪು ಅಭಿಪ್ರಾಯ. ಆದರೆ ಅತಿಯಾದ ಕೊಬ್ಬಿನ ಅಂಶವಿರುವ ಆಹಾರ ಸೇವನೆಯಿಂದ ಸಕ್ಕರೆ ಕಾಯಿಲೆ ಬೇಗನೆ ಬರಬಹುದು. ಯಾವುದೇ ವ್ಯಕ್ತಿಯ ಆಹಾರದಲ್ಲಿ ಅತಿಯಾದ ಕೊಬ್ಬಿನ ಅಂಶ ಮತ್ತು ಸಕ್ಕರೆಯ ಅಂಶವೂ ಅಧಿಕವಾಗಿದ್ದರೆ, ಹಾಗೂ ಬಹಳ ವರ್ಷಗಳ ಕಾಲ ಅದೇ ಪದ್ದತಿಯನ್ನು ಅನುಸರಿಸುತ್ತಿದ್ದರೆ ೩೦ ವರ್ಷ ವಯಸ್ಸು ಪ್ರಾರಂಭವಾಗುತ್ತಿಂದಂತೆಯೇ ಸಕ್ಕರೆ ಕಾಯಿಲೆಯ ರೋಗ ಲಕ್ಷಣ ಕಂಡುಬರುತ್ತದೆ.

ನಾವು ಸೇವಿಸಿದ ಆಹಾರಕ್ಕೆ ತಕ್ಕಂತೆ ದೈಹಿಕ ವ್ಯಾಯಾಮ ಅಥವಾ ಚಟುವಟಿಕೆಯೂ ಕೂಡ ಬಹಳ ಮುಖ್ಯ. ಸರಿಯಾದ ರೀತಿ ದೈಹಿಕ ವ್ಯಾಯಾಮವಿಲ್ಲದೇ ಶರೀರದಲ್ಲಿ ಬೊಜ್ಜು ಬೆಳೆದಿದ್ದರೆ ಸಕ್ಕರೆ ಕಾಯಿಲೆ ಬರಬಹುದು. ನಮ್ಮ ರಾಷ್ಟ್ರದಲ್ಲಿ ಇತ್ತೀಚೆಗೆ ಕಂಡು ಬರುತ್ತಿರುವ ಸಕ್ಕರೆ ಕಾಯಿಲೆ ರೋಗಿಗಳಲ್ಲಿ ಬೊಜ್ಜು ಒಂದು ಮುಖ್ಯ ಕಾರಣ ಎಂದು ತಿಳಿದುಬಂದಿದೆ.

ನಾವು ಸೇವಿಸಿದ ಆಹಾರಕ್ಕೆ ತಕ್ಕಂತೆ ದೈಹಿಕ ವ್ಯಾಯಾಮ ಅಥವಾ ಚಟುವಟಿಕೆಯೂ ಕೂಡ ಬಹಳ ಮುಖ್ಯ. ಸರಿಯಾದ ರೀತಿ ದೈಹಿಕ ವ್ಯಾಯಾಮವಿಲ್ಲದೇ ಶರೀರದಲ್ಲಿ ಬೊಜ್ಜು ಬೆಳೆದಿದ್ದರೆ ಸಕ್ಕರೆ ಕಾಯಿಲೆ ಬರಬಹುದು. ನಮ್ಮ ರಾಷ್ಟ್ರದಲ್ಲಿ ಇತ್ತೀಚೆಗೆ ಕಂಡು ಬರುತ್ತಿರುವ ಸಕ್ಕರೆ ಕಾಯಿಲೆ ರೋಗಿಗಳಲ್ಲಿ ಬೊಜ್ಜು ಒಂದು ಮುಖ್ಯ ಕಾರಣ ಎಂದು ತಿಳಿದುಬಂದಿದೆ.

ಸಣ್ಣ ವಯಸ್ಸಿನ ಮಕ್ಕಳಿದ್ದಾಗ ಉಂಟಾದ ಆಹಾರದ ಅಪೌಷ್ಟಿಕತೆ ದೊಡ್ಡ ವಯಸ್ಸಿನವರಲ್ಲಿ ಸಕ್ಕರೆ ರೋಗ ಉಂಟುಮಾಡಬಹುದು ಎಂಬುದು ಕೂಡ ಒಂದು ಕಾರಣವಾಗಿದೆ.

ಸಣ್ಣ ಪ್ರಾಯದಲ್ಲಿ ಪದೇ ಪದೇ ಪ್ಯಾನ್ಕ್ರಿಯಾಸ್ ಅಂಗಕ್ಕೆ ವಿವಿಧ ವಿರುಸ್ಗಳಿಂದ ಸೋಂಕು ಉಂಟಾಗಿದ್ದಾರೆ ಕಾಲ ಕ್ರಮೇಣ ಇನ್ಸುಲಿನ್ ಉತ್ಪತ್ತಿಯು ಕಡಿಮೆಯಾಗಿ ಸಕ್ಕರೆ ಕಾಯಿಲೆಯ ರೋಗ ಲಕ್ಷಣ ಮಧ್ಯ ವಯಸ್ಸಿಗೂ ಮುನ್ನವೇ ಕಂಡು ಬರಬಹುದು.

ಇದಲ್ಲದೇ ಹಲವು ರಾಸಾಯನಿಕ ವಸ್ತುಗಳು ಮತ್ತು ಬಣ್ಣಗಳು ಪ್ಯಾನ್ಕ್ರಿಯಾಸ್ ಅಂಗದಲ್ಲಿ ಇನ್ಸುಲಿನ್ ಉತ್ಪತ್ತಿಯನ್ನು ಕಡಿಮೆ ಮಾಡಬಹುದು. ಕೆಲವೊಮ್ಮೆ ಕ್ಯಾನ್ಸರ್ ಕಾಯಿಲೆಯು ಸಕ್ಕರೆ ರೋಗಕ್ಕೆ ಕಾರಣವಾಗಬಹುದು.


ಸಕ್ಕರೆ ಕಾಯಿಲೆ ಇದೆ ಎ೦ದು ಹೇಗೆ ತಿಳಿಯುವುದು?

ಸಕ್ಕರೆ ಕಾಯಿಲೆಯ ರೋಗದ ಲಕ್ಷಣ ಸಾಮಾನ್ಯವಾಗಿ ವೈದ್ಯಕೀಯ ಪುಸ್ತಕದಲ್ಲಿ ತಿಳಿಸಿರುವ೦ತೆ ಅತಿಯಾದ ಬಾಯಾರಿಕೆ , ಅತಿಯಾದ ಮೂತ್ರ ಮತ್ತು ದೇಹದ ತೂಕ ಕಡಿಮೆಯಾಗುವುದು. ಆದರೆ ಈಗ ರೀತಿಯ ಲಕ್ಷಣಗಳು ಎಲ್ಲಾ ರೋಗಿಗಳಲ್ಲೂ ಕ೦ಡುಬರುವುದಿಲ್ಲ. ಸಾಮಾನ್ಯವಾಗಿ ಯುವಕರಲ್ಲಿ ಕ೦ಡುಬರುತ್ತಿರುವ ಲಕ್ಷಣವೆ೦ದರೆ

ಕಡಿಮೆ ಅವಧಿಯಲ್ಲಿ ದೇಹದ ತೂಕ ಕಡಿಮೆಯಾಗುತ್ತಿರುವುದು.
ಯಾವುದೇ ಕಾರಣವಿಲ್ಲದೆ ಆಯಾಸವಾಗುವುದು.
ದೇಹದಲ್ಲಿ ಯಾವುದಾದರೂ ಗಾಯವಾದರೆ ಬಹಳ ದಿನ ವಾಸಿಯಾಗದೆಯಿರುವುದು.
ಪದೇ ಪದೇ ಜನನಾ೦ಗದ ಮತ್ತು ಮೂತ್ರನಾಳದ ಸೋ೦ಕು ಉ೦ಟಾಗುವುದು
ಅನೇಕ ಸಲ ಯಾವುದೋ ಕಾರಣದಿ೦ದ ಆಸ್ಪತ್ರೆಗೆ ಸೇರಿದಾಗ ರಕ್ತ ಪರೀಕ್ಷೆಯಿ೦ದ ಆಕಸ್ಮಾತಾಗಿ ಸಕ್ಕರೆ ಕಾಯಿಲೆ ಎ೦ದು ತಿಳಿದುಬರುವುದು.
ಸಕ್ಕರೆ ಕಾಯಿಲೆ ಎಷ್ಟು ವರ್ಷಗಳವರೆಗೆ ಇರುತ್ತದೆ?

ಪ್ರಶ್ನೆಗೆ ಉತ್ತರ ನಿರ್ಧಿಷ್ಟವಾಗಿ ತಿಳಿಸಲು ಸಾಧ್ಯವಿಲ್ಲ. ಸಕ್ಕರೆ ಕಾಯಲೆ ಪ್ರಾರ೦ಭವಾದ ವಯಸ್ಸು, ಸಕ್ಕರೆ ರೋಗಕ್ಕೆ ಕಾರಣ, ದೇಹದ ತೂಕ, ಆಹಾರ ಪದ್ದತಿ, ಶರೀರದ ಪರಿಶ್ರಮ, ದೈಹಿಕ ವ್ಯಾಯಾಮ ಇತ್ಯಾದಿ ಅ೦ಶಗಳು ಕಾಯಿಲೆಯು ಎಷ್ಟು ವರ್ಷಗಳ ಕಾಲ ಇರಬಹುದೆ೦ದು ನಿರ್ಧರಿಸಬೇಕಾಗುತ್ತದೆ.

ಸಕ್ಕರೆ ಕಾಯಲೆಯನ್ನು ನಿಯ೦ತ್ರಿಸಬಹುದೆ ವಿನಹ ಸಂಪೂರ್ಣ ಗುಣಪಡಿಸಲು ಎಲ್ಲರಲ್ಲೂ ಸಾಧ್ಯವಿಲ್ಲ. ಆದ್ದರಿ೦ದ ಒಮ್ಮೆ ಸಕ್ಕರೆ ಕಾಯಿಲೆ ಪ್ರಾರ೦ಭವಾದರೆ ಹಲವು ವರ್ಷಗಳವರೆಗೆ ಚಿಕೆತ್ಸೆ ತೆಗೆದುಕೊಳ್ಳಬೇಕಾಗುತ್ತದೆ.
ಸಕ್ಕರೆ ಖಾಯಿಲೆಯವರು ಬೇಸಿಗೆ ಕಾಲದಲ್ಲಿ ಎಚ್ಚರವಹಿಸಬೇಕಾದ ಕ್ರಮಗಳು:
ಸಕ್ಕರೆ ಖಾಯಿಲೆಯವರು ಬೇಸಿಗೆ ಕಾಲದಲ್ಲಿ ಎಚ್ಚರವಹಿಸಬೇಕಾದ ಕ್ರಮಗಳು:

ಬೇಸಿಗೆ ಕಾಲದಲ್ಲಿ ನಮಗೆಲ್ಲಾ ತಿಳಿದಿರುವ ಹಾಗೆ ಬಿಸ್ಲು ಜಾಸ್ತಿ ಮತ್ತು ತಾಪಮಾನ ಅಥವಾ ಉಷ್ಣಾ೦ಶವು ಅಧಿಕವಾಗಿರುತ್ತದೆ. ರೀತಿಯ ಬಿಸಿಲು ಮತ್ತು ಅಧಿಕ ತಾಪಮಾನದಿ೦ದ ಮನುಷ್ಯನ ಆರೋಗ್ಯದ ಮೇಲೂ ಪ್ರಭಾವ ಬೀಳುತ್ತದೆ. ಅದರಲ್ಲೂ ಕೆಲವು ಅ೦ಗಾ೦ಗಗಳು ತೊ೦ದರೆಗಳಿಗೆ ಸಿಲುಕುವ ಸಾಧ್ಯತೆಯಿರುತ್ತದೆ. ಮೊದಲನೆಯದಾಗಿ ಆರೋಗ್ಯವ೦ತ ವ್ಯಕ್ತಿಯ ಮೇಲೆ ಪ್ರಭಾವ ಬೀರಿ ರೋಗಿಯನ್ನಾಗಿಸುವುದು ಮತ್ತು ಎರಡನೆಯದಾಗಿ ಈಗಾಗಲೇ ಯಾವುದಾದರೂ ಅನಾರೋಗ್ಯ ಸಮಸ್ಯೆಯಿ೦ದ ಇಲ್ಲವೇ ಯಾವುದಾದರೂ ಖಾಯಿಲೆಯಿ೦ದ ನರಳುತ್ತಿದ್ದರೆ ರೋಗದ ಸ್ಥಿತಿ ಉಲ್ಬಣವಾಗುವ ಪರಿಸ್ಥಿತಿ ಅಥವಾ ಮತ್ತೊ೦ದು ರೋಗವು ಬರುವ ಪರಿಸ್ಥಿತಿ. ಪರಿಸ್ಥಿತಿಯಲ್ಲಿ ಸಕ್ಕರೆ ರೋಗದಿ೦ದ ಬಳಲುತ್ತಿರುವವರು ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು. ಇದರಿ೦ದ ಮಧುಮೇಹದ ರೋಗಿಗಳು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು.

ಮೊದಲನೆಯದಾಗಿ ಸಕ್ಕರೆ ಖಾಯಿಲೆ ರೋಗಿಗಳು ಬೇಸಿಗೆ ಕಾಲದಲ್ಲಿ ಬಹಳ ಬೇಗನೆ ನೀರಿನ ಅ೦ಶ ಕಳೆದುಕೊ೦ಡು ನಿರ್ಜಲತೆಯ ಸಮಸ್ಯೆಗೆ ಒಳಗಾಗುತ್ತಾರೆ. ಇದಕ್ಕೆ ಹಲವಾರು ಕಾರಣಗಳಿದ್ದರೂ ಮುಖ್ಯವಾಗಿ ಶರೀರದಲ್ಲಿ ಸಕ್ಕರೆಯ ಅ೦ಶವನ್ನು ನಿಯಮಿತ ಔಷಧ ಸೇವನೆಯಿ೦ದ ಕಾಪಾಡಿಕೊಳ್ಳಬೇಕು ಮತ್ತು ಹೆಚ್ಚು ನೀರನ್ನು ಕುಡಿಯುತ್ತಿರಬೇಕು. ಆದಷ್ಟು ಹೆಚ್ಚು ಬಿಸಿಲು ಅಥವಾ ತಾಪಮಾನ ಅಧಿಕವಾಗಿದ್ದಾಗ ನಡೆದಾಡುವುದು ಅಥವಾ ಪ್ರಯಾಣ ಮಾಡುವುದು ಒಳ್ಳೆಯದಲ್ಲ. ಸಾಮಾನ್ಯವಾಗಿ ಬೇಸಿಗೆಯಲ್ಲಿ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಏರುಪೇರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ ಕಾರಣ ಆಗಾಗ ಶುದ್ಧವಾದ ನೀರನ್ನು ಕುಡಿಯುತ್ತಿರಬೇಕು. ವೈದ್ಯರ ಸಲಹೆ ಮೇರೆಗೆ ಆಹಾರ ಸೇವನೆ, ಪ್ರಯಾಣ ಇತ್ಯಾದಿ ಕ್ರಮ ಅನುಸರಿಸಬೇಕು.

ಸಕ್ಕರೆ ಖಾಯಲೆ ರೋಗಿಗಳು ಬಿಸಿಲು ಪ್ರಾರ೦ಭವಾದಾಗ ವ್ಯಾಯಾಮ, ನಡಿಗೆ ಇತ್ಯಾದಿ ದೈಹಿಕವಾಗಿ ಶಕ್ತಿಯನ್ನು ವ್ಯಯ ಮಾಡುವ ಅಭ್ಯಾಸ ಮಾಡಬಾರದು. ಅದರಲ್ಲೂ ವಯಸ್ಸಾದ ಹಿರಿಯರು ಸಕ್ಕರೆಯ ಖಾಯಿಲೆ ಜೊತೆಗೆ ಬೇರೆ ಖಾಯಿಲೆಯ ಸಮಸ್ಯೆಯಿದ್ದರೆ ಮು೦ಜಾಗರೂಕತೆಯಿ೦ದ ತ೦ಪು ಹೊತ್ತಿನಲ್ಲಿ ಸುಲಭವಾದ ವ್ಯಾಯಾಮ ಮಾಡಬೇಕು. ಅತಿಯಾಗಿ ಕಾಫಿ, ಟೀ ಹಾಗು ಯಾವುದೇ ಪ್ರಚೋದಕ ವಸ್ತುಗಳ ಸೇವನೆ ಮಾಡಬಾರದು.


ಮಧುಮೇಹ ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಶಗಳಿಂದ ಉಂಟಾಗುವು ಒಂದು ಕಾಯಿಲೆ. ವಂಶಪಾರಂಪರ್ಯದಿಂದ ಬರಬಹುದಾದ ಕಾಯಿಲೆಯಿದು. ಗ್ಲೂಕೋಸ್ ಒಂದು ರೀತಿಯ ಸಕ್ಕರೆಯಾಗಿದ್ದು, ಇದನ್ನು ಪ್ರಮುಖವಾಗಿ ಪ್ಯಾಂಕ್ರಿಯಾಸ್ ಅಂಗವು ಉತ್ಪತ್ತಿ ಮಾಡುವ ಇನ್ಸುಲಿನ್ ಎಂಬ ಹಾರ್ಮೋನ್ ನಿಯಂತ್ರಿಸುತ್ತದೆ.
ಸದ್ಯಕ್ಕೆ ಇದನ್ನು ಪೂರ್ಣ ಪ್ರಮಾಣದಲ್ಲಿ ನಿವಾರಿಸಲು ಸಾಧ್ಯವಾಗಿಲ್ಲ. ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಳಿತದ ಮೇಲೆ ಕಾಯಿಲೆ ನಿರ್ಧರಿತವಾಗುತ್ತದೆ. ದಿನನಿತ್ಯ ಸುಮಾರು ಇಪ್ಪತ್ತು ನಿಮಿಷದ ವ್ಯಾಯಾಮ ಅಥವಾ ನಡಿಗೆಯಿಂದ ಮಧುಮೇಹವನ್ನು ದೂರವಿಡಬಹುದೆಂದು ವೈದ್ಯರು ಹೇಳುತ್ತಾರೆ.
ಮೊದಲೆಲ್ಲಾ ಅರುವತ್ತಕ್ಕೇ ಅರಳು ಮರಳು ಅನ್ನುವಂತಹಾ ಪರಿಸ್ಥಿತಿಯೂ, ಅರುವತ್ತು ವರ್ಷ ದಾಟಿದರೆ ಒಂದಿಲ್ಲೊಂದು ವೃದ್ಧಾಪ್ಯದ ಕಾಯಿಲೆ ಅಂಟಿಕೊಳ್ಳಲು ಶುರು ಹಚ್ಚಿಕೊಳ್ಳುತ್ತದೆ ಎಂಬ ಪರಿಸ್ಥಿತಿ ಇತ್ತು. ಆದರೆ ಈಗ ಹಾಗಿಲ್ಲ. ಕಾಲ ಬದಲಾಗಿದೆ. ವರುಷ ಮೂವತ್ತು ದಾಟಿತೋ, ಬೀಪಿ, ಶುಗರ್, ಬೊಜ್ಜು, ಹಾರ್ಟ್ ಪ್ರಾಬ್ಲಂ ಒಂದಿಲ್ಲೊಂದು ಮುತ್ತಿಕ್ಕಿಕೊಂಡು ಬಿಡಲಾರಂಭಿಸಿದೆ.

ಪ್ರಕೃತಿಯನ್ನು, ವಾತಾವರಣವನ್ನು ನಾವು ಅಷ್ಟರ ಮಟ್ಟಿಗೆ ಹಾಳು ಮಾಡಿಕೊಂಡಿದ್ದೇವೆ. ಹೀಗಾಗಿ ಇದ್ದುದರಲ್ಲೇ ಬದುಕಬೇಕಾದ ಅನಿವಾರ್ಯತೆ. ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ (ಐಡಿಎಫ್)ದ ವರದಿ ಪ್ರಕಾರ, ಭಾರತದಲ್ಲಿ ಮಧುಮೇಹ, ಸಕ್ಕರೆ ಕಾಯಿಲೆ, ಸಿಹಿಮೂತ್ರ ರೋಗ ಎಂದೆಲ್ಲಾ ಕರೆಯಲ್ಪಡುವ ಡಯಾಬಿಟೀಸ್‌ನಿಂದ ಬಳಲುತ್ತಿರುವವರ ಸಂಖ್ಯೆ 4.09 ಕೋಟಿ. ಇದು ಹೀಗೆಯೇ ಮುಂದುವರಿದರೆ, 2030ರ ವೇಳೆಗೆ ಜಗತ್ತಿನ ಐವರು ಮಧುಮೇಹಿಗಳಲ್ಲಿ ಒಬ್ಬ ಭಾರತೀಯ ಇರುವಷ್ಟರ ಮಟ್ಟಕ್ಕೆ ಮುಟ್ಟುತ್ತದೆಯಂತೆ!

ಹಾಗಿದ್ದರೆ, ಮಧುಮೇಹಕ್ಕೆ ಕಾರಣಗಳೇನು? ನಮ್ಮ ಬದಲಾಗಿರುವ ಜೀವನ ಶೈಲಿಯೇ? ಮಾನಸಿಕ ಒತ್ತಡವೇ? ನಮ್ಮ ಜೀನ್‌ಗಳೇ? ಈ ತೊಂದರೆ ಬಾರದಂತೆ, ಬಂದಿದ್ದನ್ನು ನಿಯಂತ್ರಿಸುವಂತೆ ಏನಾದರೂ ಉಪಾಯಗಳಿವೆಯೇ?

ಹೌದು, ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ನಮ್ಮ ಜೀವನ ಶೈಲಿ ಎಂಬುದರಲ್ಲಿ ಎರಡು ಮಾತಿಲ್ಲ. ಈ ಜೀವನ ಶೈಲಿಯಲ್ಲಿ ಮಧುಮೇಹಕ್ಕೆ ಪೂರಕವಾಗುವಂಥವುಗಳ ಬಗ್ಗೆ ಒಂದಿಷ್ಟು ಗಮನ ಹರಿಸೋಣ:

ಕೂತಲ್ಲೇ ಕೆಲಸ...
ಮುಖ್ಯವಾಗಿ, ಇದು ಕುಳಿತು ತಿನ್ನುವ ಕಾಲ. ಅಂದರೆ ಒಂದು ಬೆಳಿಗ್ಗೆ ಕಂಪ್ಯೂಟರ್ ಎದುರು ಕುಳಿತರೆ ಏಳೋದು ರಾತ್ರೀನೇ. ಬರೇ ಕೈಬೆರಳುಗಳಿಗೆ ಮಾತ್ರವೇ ಒಂದಿಷ್ಟು ವ್ಯಾಯಾಮ ದೊರೆತರೆ ಸಾಕೇ? ದೇಹವೂ ಒಂದಿಷ್ಟು ಅಲುಗಾಡಬೇಡವೇ? ಕುಳಿತುಕೊಂಡೇ ಮಾಡುವ ಕೆಲಸ ಇರುವವರಿಗೆ ವಾಕಿಂಗ್ ಅಥವಾ ಮೆಟ್ಟಿಲೇರುವುದು... ಇಂಥವೆಲ್ಲ ಬೇಕೇ ಬೇಕು. ಕುಳಿತೇ ಕೆಲಸ ಮಾಡುವವರು ಒಂದು ಗಂಟೆಗೊಮ್ಮೆಯಾದರೂ ಎದ್ದು ಅತ್ತಿತ್ತ ಹೋಗಿ, ನೀರು ಕುಡಿದು ಬಂದರೆ ಒಳಿತು. ಕೂತಲ್ಲೇ ಕೆಲಸ ಮಾಡುವುದು ಬೊಜ್ಜು ಹೆಚ್ಚಿಸಬಹುದು, ಇದರಿಂದ ಡಯಾಬಿಟೀಸ್ ಚಿಗಿತುಕೊಳ್ಳಲೂ ಕಾರಣವಾಗಬಹುದು.

ಒತ್ತಡ...
ಡೆಡ್‌ಲೈನುಗಳನ್ನು ಮೀಟ್ ಮಾಡುವ ಸಾಹಸ, ಮಾರಾಟದಲ್ಲಿ ಇಂತಿಷ್ಟು ಗುರಿ ಸಾಧಿಸಬೇಕೆಂಬ ಒತ್ತಡ, ಇಷ್ಟು ಗಂಟೆಯೊಳಗೆ ಇಷ್ಟು ಕೆಲಸ ಆಗಲೇಬೇಕೆಂಬ ನಿಯಮ... ಇದಲ್ಲದೆ, ಹೊರಗಿನಿಂದಲೂ ಬೆಲೆ ಏರಿಕೆ, ಸಾಂಸಾರಿಕ ಒತ್ತಡಗಳು... ಕಚೇರಿಯಲ್ಲಿಯೂ ನೆಮ್ಮದಿಯಿಲ್ಲ... ಇಂತಹಾ ಪರಿಸ್ಥಿತಿಯು ಮಾನಸಿಕ ಒತ್ತಡಕ್ಕೆ ಕಾರಣವಾಗಿ, ನೇರವಾಗಿ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ ಮಾತ್ರವಲ್ಲದೆ, ಡಯಾಬಿಟೀಸ್ ಹೆಚ್ಚಳಕ್ಕೂ ತನ್ನ ಕೊಡುಗೆ ನೀಡುತ್ತದೆ ಎನ್ನುತ್ತಾರೆ ತಜ್ಞರು.

ಜಂಕ್ ಫುಡ್ ಇಷ್ಟಾನೋ...
ನಗರೀಕರಣ ಹೆಚ್ಚಾದಂತೆ, ಯಾವುದೇ ಪೋಷಕಾಂಶಗಳಿಲ್ಲದ, ಜಂಕ್ ಆಹಾರಕ್ಕೆ ನಾವೆಲ್ಲಾ ಮೊರೆ ಹೋಗುತ್ತಿದ್ದೇವೆ. ನಾರಿನಂಶವಿರುವ ಗೋಧಿಯ ಬದಲು, ಅತ್ಯಲ್ಪ ಕಾರ್ಬೊಹೈಡ್ರೇಟ್ ಇರುವ ಮೈದಾ ಹಿಟ್ಟಿನ ಆಹಾರಕ್ಕೆ, ಪಾಸ್ತಾ, ಪಿಜ್ಜಾ, ನೂಡಲ್... ಏನೇನೋ ಕಂಡು ಕೇಳರಿಯದ ಪೋಷಕಾಂಶಗಳಿಲ್ಲದ ಆಹಾರಕ್ಕೆ ಬಲಿಯಾಗುತ್ತಿದ್ದೇವೆ. ನಾಲಿಗೆ ಚಪಲ ಬಿಡಬೇಕಲ್ಲ... ಅದೂ ಇರಲಿ, ನಮ್ಮ ಸಾಂಪ್ರದಾಯಿಕ ಆಹಾರಗಳೂ ಇರಲಿ. ಇಲ್ಲವಾದಲ್ಲಿ ಪರಿತಪಿಸಬೇಕಾಗಿರುವುದು ನಾವೇ ಅಲ್ಲವೇ?

ಒಂದು ವರದಿಯ ಪ್ರಕಾರ, ಪಾಶ್ಚಾತ್ಯರಿಗೆ ಹೋಲಿಸಿದರೆ ಮಧುಮೇಹಕ್ಕೆ ತುತ್ತಾಗುವ ಭಾರತೀಯರ ವಯಸ್ಸು ಅವರಿಗಿಂತ ಸುಮಾರು 10-20 ವರ್ಷ ಕಡಿಮೆ. ಅಂದರೆ ಯುವ ಪ್ರಾಯದಲ್ಲೇ ಇದು ಬಾಧಿಸುತ್ತದೆ. ಇದಕ್ಕೆ ಭಾರತೀಯ ಜೀವನ ಶೈಲಿ, ಆಹಾರ ಸೇವನಾ ಪದ್ಧತಿಯೂ ಪ್ರಮುಖ ಕಾರಣ.

ಹಾಗಿದ್ದರೆ ನಾವೇನು ಮಾಡಬಹುದು...
* ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಂಡು, ಡಯಾಬಿಟಿಸ್ ಇದೆಯೇ ಎಂದು ತಿಳಿದುಕೊಳ್ಳಬೇಕು. ಡಯಾಬಿಟೀಸ್ ಆರಂಭವಾದಾಗಲೇ ಇದು ಪತ್ತೆಯಾದರೆ, (ಇದನ್ನು ಪ್ರಿ-ಡಯಾಬಿಟಿಸ್ ಅಂತ ಕರೀತಾರೆ) ಅದನ್ನು ಗುಣಪಡಿಸುವುದು ಸುಲಭ. ಆದರೆ ಅದು ಡಯಾಬಿಟಿಸ್ ಹಂತಕ್ಕೆ ತಲುಪಿದರೆ, ಅದನ್ನು ಸಂಪೂರ್ಣ ಕಿತ್ತು ಹಾಕುವ ಮದ್ದಿಲ್ಲ. ಹೀಗಾಗಿ ಬಾರದಂತೆ ತಡೆಯುವುದೇ ನಮ್ಮ ಉದ್ದೇಶವಾಗಿರಬೇಕು.
* ತೂಕದವರಾಗಿದ್ದರೆ, ಆದಷ್ಟು ಬೇಗ ತೂಕ ಇಳಿಸಿಕೊಳ್ಳಬೇಕು. ಬೊಜ್ಜು ಕಡಿಮೆಯಾದರೆ ಡಯಾಬಿಟೀಸ್‌ನ ರಿಸ್ಕ್ ಕೂಡ ಕಡಿಮೆಯಾಗುತ್ತದೆ ಎಂಬುದನ್ನು ಮರೆಯಬೇಡಿ. ಜೀವನಶೈಲಿ - ಆಹಾರ ಸೇವನೆಯಲ್ಲಿ ಬದಲಾವಣೆ ಮತ್ತು ನಿಯಮಿತ ವ್ಯಾಯಾಮ ಮಾಡಿದರೆ ಅತ್ಯುತ್ತಮ. ಸೊಪ್ಪು-ತರಕಾರಿ, ಪೂರಿ, ಮೈದಾದಿಂದ ಮಾಡಿದ ಬ್ರೆಡ್ ಐಟಂ ಮುಂತಾದವುಗಳ ಬದಲು ರೋಟಿ, ಕುಚ್ಚಲಕ್ಕಿಯಂತಹಾ ಪೂರ್ಣಧಾನ್ಯದ ಆಹಾರ ಧಾರಾಳ ಸೇವಿಸಬೇಕು.
* ಬಣ್ಣ ಬಣ್ಣದ ಪೊಟ್ಟಣಗಳಲ್ಲಿ ಬರುವ ಚಿಪ್ಸ್, ಕುಕೀಸ್, ಕೇಕುಗಳು, ಐಸ್ ಕ್ರೀಂಗಳು ಮುಂತಾದವುಗಳನ್ನು ಸಾಧ್ಯವಾದಷ್ಟು ದೂರ ಮಾಡಿ.
* ದಿನಕ್ಕೆ ಕನಿಷ್ಠ ಅರ್ಧಗಂಟೆಯಂತೆ ವಾರದ ಐದು ದಿನಗಳಾದರೂ ವ್ಯಾಯಾಮ ಮಾಡಬೇಕು.
* ಸಾಧ್ಯವಿರುವಾಗಲೆಲ್ಲಾ ನಡೆಯಿರಿ, ಮೆಟ್ಟಿಲು ಹತ್ತಿ ತಾರಸಿಗೆ ಹೋಗಿ.
* ಮಾನಸಿಕ ಒತ್ತಡ ನಿವಾರಣೆಗಾಗಿ ಯೋಗ ಅಥವಾ ಧ್ಯಾನಕ್ಕೆ ಮೊರೆ ಹೋಗಿ.
* ಧೂಮಪಾನ ತ್ಯಜಿಸಿ
* ಮದ್ಯಪಾನದಿಂದ ದೂರವಿರಿ.